ಬಳ್ಳಾರಿ: ಮತ್ತೊಮ್ಮೆ ನಮ್ಮೆಲ್ಲರ ಮನೆಮನ ಬೆಳಗಲು ಗಣೇಶ ಬರುತ್ತಿದ್ದಾನೆ. ಗಣೇಶ ಚತುರ್ಥಿ ಹಬ್ಬ ಸನಿಹದಲ್ಲಿರುವ ಈ ಸಂದರ್ಭದಲ್ಲಿ ಬಳ್ಳಾರಿ ಮಾರುಕಟ್ಟೆಯಲ್ಲಿ ತರಹೇವಾರಿ ಪಿಒಪಿ ಗಣೇಶ್ ವಿಗ್ರಹಗಳು ಲಗ್ಗೆ ಇಡುತ್ತಿವೆ. ಇವುಗಳ ನಡುವೆಯೇ ಪರಿಸರ ಸ್ನೇಹಿ ಗಣೇಶ ವಿಗ್ರಹಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಗಮನಾರ್ಹ ಬಳ್ಳಾರಿ ಜಿಲ್ಲಾಡಳಿತ ಪರಿಸರ ಸ್ನೇಹಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡುವಂತೆ ಸೂಚನೆ ನೀಡಿದೆ ಹಾಗೂ ಎಲ್ಲೆಡೆ ಈ ಕುರಿತು ಜಾಗೃತಿ ಮೂಡಿಸುತ್ತಿದೆ. ಇದರ ಪರಿಣಾಮವಾಗಿ ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಮುಂದಾಗುತ್ತಿದ್ದಾರೆ. ಈ ಕಾರಣದಿಂದ ಪಿಒಪಿ ಗಣೇಶ್ ವಿಗ್ರಹಗಳ ಅಬ್ಬರದ ಮಾರಾಟದ ನಡುವೆಯೂ ಪರಿಸರ ಸ್ನೇಹಿ ಗಣೇಶ ವಿಗ್ರಹಗಳಿಗೂ ಸಹ ಬೇಡಿಕೆ ಹೆಚ್ಚಾಗುತ್ತಿದೆ ಎಂದರೆ ತಪ್