ಹಾಸನ: ಸಕಲೇಶಪುರ ಭಾಗದಲ್ಲಿ ನೀರಿನ ಕಾಲುವೆಗಳ ದುರಸ್ತಿ ಮಾಡಿ ನದಿಗಳ ನೀರನ್ನು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಇದಕ್ಕಾಗಿ ಹೆಚ್ಚಿನ ಅನುದಾನ ನೀಡಬೇಕು ಎಂದು ಶಾಸಕ ಸಿಮೆಂಟ್ ಮಂಜು ಮನವಿ ಮಾಡಿದರು.ಸದನದಲ್ಲಿ ಇಂದು ಈ ಬಗ್ಗೆ ಮಾತನಾಡಿದ ಅವರು, ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿ ಯಗಚಿ, ವಾಟೆಹೊಳೆ, ಮತ್ತು ಎತ್ತಿನಹೊಳೆ ನೀರಾವರಿ ಯೋಜನೆಯೂ ಸಹ ನಮ್ಮ ಕ್ಷೇತ್ರದಿಂದಲೇ ಪ್ರಾರಂಭವಾಗುತ್ತದೆ.ಯಗಚಿ ಜಲಾಶಯದ ನೀರಿನಲ್ಲಿ 18000 ಎಕರೆ ಭೂಪ್ರದೇಶಕ್ಕೆ ನೀರಾವರಿಯನ್ನು ಒದಗಿಸಬಹುದಾಗಿದ್ದು ಕಾಲುವೆಗಳ ನಿರ್ವಹಣೆ ಸರಿ ಇಲ್ಲದ ಕಾರಣ ಕೇವಲ 5000 ಎಕರೆ ಪ್ರದೇಶಗಳಿಗೆ ನೀರಾವರಿ ತಲುಪುತ್ತಿದೆ. ಸರ್ಕಾರ ಈ ಕುರಿತು ಗಮನಹರಿಸಿ ನಮ್ಮ ಕ್ಷೇತ್ರದ ಕಾಲುವೆಗಳನ್ನು ದುರಸ್ತಿ ಮಾಡಲು ಮನವಿ