Download Now Banner

This browser does not support the video element.

ಚಿಕ್ಕನಾಯಕನಹಳ್ಳಿ: ಹುಳಿಯಾರು ಪ.ಪಂ. ಮುಖ್ಯಾಧಿಕಾರಿ ನೇಮಕಕ್ಕೆ ತೀವ್ರ ವಿರೋಧ, ಪೊಲೀಸ್ ರಕ್ಷಣೆಯಲ್ಲಿ ಮಂಜುನಾಥ್ ಅಧಿಕಾರ ಸ್ವೀಕಾರ

Chiknayakanhalli, Tumakuru | Sep 4, 2025
ಹುಳಿಯಾರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯಾಗಿ ಮಂಜುನಾಥ್ ನೇಮಕವು ವಿವಾದಕ್ಕೆ ಕಾರಣವಾಯಿತು. 18 ಕೌನ್ಸಿಲರ್‌ಗಳಲ್ಲಿ 9 ಮಂದಿ ಸೇರಿದಂತೆ ಹಲವರು ಕಚೇರಿ ಮುಂದೆ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿ, "ಗೋ ಬ್ಯಾಕ್ ಮಂಜುನಾಥ್" ಘೋಷಣೆ ಕೂಗಿದರು. ಮಂಜುನಾಥ್ ಬೆಂಬಲಿಗರು ಕೂಡ ಸ್ಥಳದಲ್ಲಿ ಸೇರಿ ಪರ-ವಿರೋಧ ಸಂಘರ್ಷ ಉಂಟಾಯಿತು. ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದರು. ಕೊನೆಗೆ, ಗುರುವಾರ ಮಧ್ಯಾಹ್ನ 2 ಗಂಟೆಯಲ್ಲಿ ಪೊಲೀಸ್ ರಕ್ಷಣೆಯಲ್ಲಿ ಮಂಜುನಾಥ್ ಅಧಿಕಾರ ವಹಿಸಿಕೊಂಡರು. ವಿರೋಧಿಗಳು ಶಾಸಕರನ್ನು ಭೇಟಿ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Read More News
T & CPrivacy PolicyContact Us