ಬಳ್ಳಾರಿ ನಗರದ ಗಾಂಧಿ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂಭಾಗದಲ್ಲಿ ಸೋಮವಾರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಬೆಳಿಗ್ಗೆ 11ಗಂಟೆಗೆ ಒಂದು ದಿನದ ಮುಷ್ಕರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಸಂಘದ ಅಧ್ಯಕ್ಷ ಡಿಪಿ ಬೊಮ್ಮಯ್ಯ ಅವರು ಮಾತನಾಡಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಎಸ್ಸಿ ಎಸ್ಟಿ ನೌಕರರ ಸಮಸ್ಯೆ ತಿಳಿಯಲು ಎಸ್ಸಿ ಎಸ್ಟಿ ಗ್ರಿವಿಯನ್ಸ್ ಸೆಲ್ ತೆರಬೇಕು ಮತ್ತು ಟ್ರಾನ್ಸಫರ್, ಪ್ರಮೋಷನ್, ಸಿನಿಯಾರಿಟಿ ಲಿಸ್ಟ್, ಡಿಸಿಪ್ಲೇನರಿ ಕೇಸ್ ನಲ್ಲಿ ಎಸ್ಸಿ ಎಸ್ಟಿ ನೌಕರರಿಗೆ ತಾರತಮ್ಯ ಮಾಡಲಾಗುತ್ತ