ನಗರದ ಜೀವಧಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಾಮಸ್ವಾಮಿ ವೃತದಲ್ಲಿ ವಾಹನ ಸವಾರರಿಗೆ ಹಾಗೂ ರಸ್ತೆ ಬದಿಯಲ್ಲಿ ನಿಂತಿರುವ ಸಾರ್ವಜನಿಕರಿಗೆ ಗಣೇಶನ ವೇಷ ಧರಿಸಿ ರಕ್ತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಕರಪತ್ರವನ್ನು ಹಂಚಿಕೆ ಮಾಡಲಾಯಿತು. ನಗರದ ಹಳೇ ಕೆಸರೆ ನಿವಾಸಿ ಲೋಹಿತ್ ಗಣೇಶನ ವೇಷ ಧರಿಸಿ, ದ್ವಿಚಕ್ರ ವಾಹನ ಸವಾರರಿಗೆ ಜಾಗೃತಿಯ ನಾಮಫಲಕ ಹಿಡಿದು ಕರಪತ್ರ ನೀಡಿ ಜಾಗೃತಿ ಮೂಡಿಸುವ ವಿನೂತನ ಪ್ರಯತ್ನ ಮಾಡಿದರು.