ಬಾಗಲಕೊಟ ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದ ಮಹಾಂತಲಿAಗ ಶಿವಾಚಾರ್ಯರ ಮಠದಲ್ಲಿ ಗಣೇಶ ಚತುರ್ಥೀ ಹಬ್ಬದ ಅಂಗವಾಗಿ ಅಗಸ್ಟ ೨೭ ಮಧ್ಯಾಹ್ನ ೧೨ ಗಂಟೆಗೆ ವಿಘ್ನ ವಿನಾಶಕ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಲೋಕ ಕಲ್ಯಾಣಕ್ಕಾಗಿ ಸರ್ವರಿಗೂ ತಮ್ಮ ತಮ್ಮ ದಿನ ನಿತ್ಯದ ಬದುಕಿನಲ್ಲಿ ಯಾವ ವಿಘ್ನ ಬಾರದಂತೆ ವಿನಾಯಕ ಎಲ್ಲ ಕಷ್ಟಗಳನ್ನು ನಿವಾರಿಸಿ ಸಮಸ್ತ ಮನುಕುಲಕ್ಕೆ ಒಳಿತನ್ನು ಮಾಡಲಿ ಎಂದು ಮಹಾಂತಲಿAಗ ಶಿವಾಚಾರ್ಯರು ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಾರ್ಥಿಸಿದರು. ಈ ಸಮಯದಲ್ಲಿ ಡಾ.ಚನ್ನಬಸವದೇವರು ಇದ್ದರು.