ಗೌರವಧನ ಹೆಚ್ಚಳ ಮಾಡಿರುವುದಕ್ಕಾಗಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಗ್ರಾ.ಪಂ. ಮಟ್ಟದ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಸಖಿಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷೆ ರುದ್ರಮ್ಮ ಅಭಿನಂದಿಸಿದ್ದಾರೆ. ಗುರುವಾರ ಸಂಜೆ 6:20 ಕ್ಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 2011ರಲ್ಲಿ ಆರಂಭವಾದ ಸಂಜೀವಿನಿ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನವು 2014ರಿಂದ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಹಂತ ಹಂತವಾಗಿ ಅನುಷ್ಠಾನವಾಗಿದೆ ಎಂದರು. 2019ರಲ್ಲಿ ಸಂಪೂರ್ಣವಾಗಿ ಅನುಷ್ಠಾನದಿಂದ ಯೋಜನೆಯಲ್ಲಿ ಆರಂಭವಾಗಿ 4000 ಗೌರವಧನ, ಮುಖ್ಯ ಪುಸ್ತಕ ಬರಹಗಾರರಿಗೆ 2000 ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಗೌರವಧನ ವಿತರಿಸಲಾಗಿತ್ತು.