ಚಾರ್ಮಾಡಿ ಘಾಟ್‌ನಲ್ಲಿ ಹೊಸ ರೂಲ್ಸ್ – ಇನ್ಮುಂದೆ ಐದು ವಾಹನಗಳಿದ್ದರೆ ಮಾತ್ರ ಎಂಟ್ರಿ ಕಾಫಿನಾಡು–ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ ಇನ್ಮುಂದೆ ಹೊಸ ನಿಯಮಗಳು ಜಾರಿಯಾಗಲಿದೆ. ರಾತ್ರಿ ವೇಳೆಯಲ್ಲಿ ಚೆಕ್ ಪೋಸ್ಟ್ ಮೂಲಕ ಸಾಗುವ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಐದು ವಾಹನಗಳನ್ನು ಒಟ್ಟಾಗಿ ಸಂಚರಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.ದಟ್ಟ ಅರಣ್ಯದ ನಡುವೆ ಹಾವು ಬಳುಕಿನ ಹಾದಿಯಲ್ಲಿರುವ ಈ ಚಾರ್ಮಾಡಿ ಘಾಟ್‌ನಲ್ಲಿ ರಾತ್ರಿ ವೇಳೆ ಗೋ ಕಳ್ಳತನ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ ಅನ್ನೋ