ನಾಪೋಕ್ಲು :ನರಿಯಂದಡ ಕೇಂದ್ರ ಪ್ರೌಢಶಾಲೆ ಮುಚ್ಚಲ್ಪಟ್ಟ ವಿಚಾರಗಳ ಬಗ್ಗೆ ವಿಶೇಷ ಮಹಾಸಭೆಯಲ್ಲಿ ಶಾಲಾ ಆಡಳಿತ ಮಂಡಳಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರೋದು ಸತ್ಯಕ್ಕೆ ದೂರವಾದದ್ದು ಎಂದು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ ಸ್ಪಷ್ಟಪಡಿಸಿದ್ದಾರೆ.ನರಿಯಂದಡ ಕೇಂದ್ರ ಪ್ರೌಢಶಾಲೆಯ ಸಭಾಂಗಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚೇನಂಡ ಗಿರೀಶ್ ಪೂಣಚ್ಚ ಅವರು ವಿದ್ಯಾರ್ಥಿಗಳ ಕೊರೆತೆಯಿಂದ ಸರಕಾರದ ಆದೇಶದನ್ವಯ ಶಾಲೆ ಮುಚ್ಚಲಾಗಿದೆ.ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರನ್ನು ಕರೆದು ಸಭೆ ನಡೆಸಿ ವಿಷಯಗಳನ್ನು ಚರ್ಚಿಸಿ ಮುಂದಕ್ಕೆ ಏನು ಮಾಡಬೇಕೆಂದು ವಿಸ್ತೀರ್ಣವಾಗಿ ಚರ್ಚಿಸಿ ನಂತರ ಆದೇಶವನ್ನು ಪರಿಗಣಿಸಿ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ವರ್ಗಾಹಿಸುವಂತೆಯೂ, ಶಿಕ್ಷಕರನ್