ಪೊಲೀಸ್ ಸಿಬ್ಬಂದಿ ಮೇಲೆ ಪೊಲೀಸ್ ಸಿಬ್ಬಂದಿ ಅಟ್ಯಾಕ್ ಮಾಡಿರುವ ಘಟನೆ ಆಗಸ್ಟ್ 30ರಂದು ಬೆಳಕಿಗೆ ಬಂದಿದೆ. ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು ಮಧುಸೂಧನ್ ಎನ್ನುವ ಚಾಮರಾಜಪೇಟೆಯ ಹೆಡ್ ಕಾನ್ಸ್ಟೇಬಲ್ ತಮ್ಮ ಫಿಶ್ ಅಂಗಡಿ ಇಟ್ಟಿದ್ದ. ಫಿಶ್ ಅಂಗಡಿಯಲ್ಲಿ ಎಣ್ಣೆ ಹೊಡೆಯಲು ಅವಕಾಶ ಕೊಟ್ಟ ಹಿನ್ನಲೆ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗಿತ್ತು. ಇದನ್ನು ಪ್ರಶ್ನೆ ಮಾಡೋದಕ್ಕೆ ಕೆಪಿ ಅಗ್ರಹಾರ ಪೊಲೀಸರು ಸ್ಥಳಕ್ಕೆ ಬರ್ತಾರೆ, ಸಿಬ್ಬಂದಿ ಜೊತೆ ಕ್ಯಾತೆ ತೆಗೆದು ಹಲ್ಲೆ ಮಾಡಿರುವ ಆರೋಪ ಇದೆ.