ಸಾಗರದ ಜೋಗ ರಸ್ತೆಯಲ್ಲಿ ಸಾಲಾಗಿ ನಿಂತಿದ್ದ ದ್ವಿಚಕ್ರ ವಾಹನ ಹಾಗೂ ಓಮಿನಿ ಕಾರಿಗೆ ಅತಿ ವೇಗದಲ್ಲಿ ಬಂದ ಐ20 ಕಾರ್ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲೈದು ದ್ವಿಚಕ್ರ ವಾಹನ ಹಾಗೂ ಓಮಿನಿ ಕಾರಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗುರುವಾರ ಸಂಜೆ 5 ಗಂಟೆಗೆ ಸಾಗರ ನಗರದ ರಾಷ್ಟ್ರೀಯ ಹೆದ್ದಾರಿ ಜೋಗ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸ ನೋಡಿದರೆ ದೊಡ್ಡ ಅನಾಹುತ ಒಂದು ತಪ್ಪಿತಂತಾಗಿದ್ದು ಸುಳ್ಳಲ್ಲ. ಸ್ಥಳಕ್ಕೆ ಸಾಗರ ಪೇಟೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.