ಗಣೇಶ ಹಬ್ಬ ಅಂದರೆ ಯುವಕರಿಗೆ ಎಲ್ಲಿಲ್ಲದ ಸಂತೋಷ ಸಂಭ್ರಮ. ಆದರೆ ಕೆಲವೆಡೆ ಪದ್ಧತಿ ಬದಿಗಿಟ್ಟು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವುದೇ ಹಬ್ಬದ ಭಾಗವಾಗಿ ಮಾರ್ಪಟ್ಟಿದೆ. ಆದರೆ ಕಮಲಾಪುರ ಪಟ್ಟಣದ ಬಸ್ ನಿಲ್ದಾಣ ಹತ್ತಿರ ಶ್ರೀ ಮಾಣಿಕೇಶ್ವರ ಗಜಾನನ ಮಂಡಳಿಯು ವಿಭಿನ್ನ ರೀತಿಯಲ್ಲಿ ಗಣೇಶೋತ್ಸವವನ್ನು ಆಚರಿಸಿದೆ. ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ವೇದಿಕೆಯಲ್ಲಿ ಸಾಂಪ್ರದಾಯಿಕ ಗೀಗಿ ಪದಗಳ ಮೂಲಕ ಗಣೇಶ ಹಬ್ಬ ಆಚರಣೆಯ ಹಿನ್ನೆಲೆ, ಅದರ ಪದ್ಧತಿ, ಹಾಗೂ ಕೋಮು ಸೌಹಾರ್ದತೆಯ ಮಹತ್ವವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಯಿತು. ಭಾನುವಾರ ಬೆಳಗ್ಗೆ 10 ರಿಂದ 4 ಗಂಟೆಯಾದರೂ ಕಾರ್ಯಕ್ರಮ ಮುಂದುವರೆದು ಯುವಕರಲ್ಲಿ ಅರ್ಥಪೂರ್ಣ ಸಂಭ್ರಮ ಮೂಡಿಸುವ ಜೊತೆಗೆ, ಸಮಾಜದಲ್ಲಿ ಸೌಹಾರ್ದತೆ ಮತ್ತು ಒಗ್ಗಟ್ಟಿನ ಸಂದ