ಧರ್ಮಸ್ಥಳಕ್ಕೆ ಅಪಖ್ಯಾತಿ ತರುವುದನ್ನು ಖಂಡಿಸಿ ಹಾಗೂ ಅಲ್ಲಿನ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ ಅವರಿಗೆ ಬೆಂಬಲ ಸೂಚಿಸಿ ಸೆ. 2 ರಂದು ನಗರದ ನಂಜರಾಜ ಬಹದ್ದೂರ್ ಛತ್ರದಿಂದ ಸುಮಾರು ಸಾವಿರ ಮಂದಿ ಭಕ್ತರು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಧರ್ಮಸ್ಥಳ ಭಕ್ತರ ಒಕ್ಕೂಟದ ಸಂಚಾಲಕ ನಾರಾಯಣ ವಿ. ಹೆಗಡೆ ತಿಳಿಸಿದರು. ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅವರು, ಅಂದು ಬೆಳಗ್ಗೆ 5ಕ್ಕೆ ಸುಮಾರು 10 ಬಸ್‌ಗಳಲ್ಲಿ ಪ್ರಯಾಣ ಬೆಳೆಸಲಿದ್ದೇವೆ. ಮಧ್ಯಾಹ್ನ 12ಕ್ಕೆ ಧರ್ನಸ್ಥಳ ತಲುಪಿ, ಪಾದಯಾತ್ರೆ ಕೈಗೊಂಡು, ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ, ಸಂಜೆ 4ಕ್ಕೆ ಅಲ್ಲಿಂದ ವಾಪಸ್ ಪ್ರಯಾಣ ಆರಂಭಿಸಲಿದ್ದಾರೆ. ಧರ್ಮಸ್ಥಳ ನಾಡಿನ ಅತ್ಯಂತ ಶ್ರದ್ಧಾ ಕೇಂದ್ರವೂ ಆಗಿದೆ.