ಪಾವಗಡದಲ್ಲಿ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಅಭಿಯಾನಕ್ಕೆ ಪುರಸಭಾ ಅಧ್ಯಕ್ಷರಿಂದ ಚಾಲನೆ ಪಾವಗಡ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮತ್ತು ಜನರ ಸುರಕ್ಷತೆಗಾಗಿ ಪುರಸಭೆ ಹಾಗೂ ಪಶುಪಾಲನಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ರೇಬಿಸ್ ಲಸಿಕೆ ಅಭಿಯಾನಕ್ಕೆ ಪುರಸಭಾ ಅಧ್ಯಕ್ಷ ಸುದೇಶ್ ಬಾಬು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, "ಪಟ್ಟಣದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಹಾಗೂ ಮಾಂಸ ಮಳಿಗೆಗಳ ಮುಂಭಾಗದಲ್ಲಿ ಮಾಂಸದ ತುಂಡುಗಳನ್ನು ಬಿಸಾಡುವುದರಿಂದ ಬೀದಿ ನಾಯಿಗಳು ಗುಂಪು ಸೇರುತ್ತವೆ ಮತ್ತು ಜನರ ಮೇಲೆ ದಾಳಿ ನಡೆಸುವ ಘಟನೆಗಳು ನಡೆಯುತ್ತವೆ. ಸಾಂಕ್ರ