ಕೆಕೆಆರ್‌ಟಿಸಿ ಅಧ್ಯಕ್ಷ ಸ್ಥಾನದಿಂದ ವಂಚಿತರಾದ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮುಲಗೆ ಶಾಸಕ ಅಲ್ಲಮ್ಮ ಪ್ರಭು ಪಾಟೀಲ್ ವಿರುದ್ಧ ತೀವ್ರ ಅಸಮದಾನ ವ್ಯಕ್ತ ಪಡಿಸಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಆದರೂ ಮೂರು ಬಾರಿ ಕಲಬುರಗಿ ದಕ್ಷಿಣ ವಿಧಾನ ಸಭೆ ಕ್ಷೇತ್ರದ ಟಿಕೇಟ್ ವಂಚಿತನಾಗಿದ್ದೇನೆ. ಕಳೆದ ಚುನಾವಣೆಯಲ್ಲಿ ಅಲ್ಲಮಪ್ರಭು ಪಾಟೀಲ್ ನನ್ನ ಹತ್ತಿರ ಬಂದು ನನಗೆ ವಯಸ್ಸಾಗಿದೆ ಅವಕಾಶ ಕೊಡು ಅಂದಾಗ ಮತ್ತೊಮ್ಮೆ ಅವರಿಗೆ ಟಿಕೇಟ್ ಬಿಟ್ಟುಕೊಟ್ಟಿದ್ದಲ್ಲದೆ, ಅವರ ಗೆಲುವಿಗೆ ಶ್ರಮಿಸಿದ್ದೇನೆ. ಮಾತೆತ್ತಿದರೆ ನನಗೆ ತಮ್ಮ ಅಂತ ಕರಿತ್ತಾರೆ. ಆದ್ರೆ ತಮ್ಮ ಮಗನಿಗೆ ಕೆಕೆಆರ್‌ಟಿಸಿ ಅಧ್ಯಕ್ಷ ಸ್ಥಾನ ಕೊಡದಿದ್ದರೆ ರಾಜೀನಾಮೆ ಕೊಡುವದಾಗಿ ಶಾಸಕ ಎಂವೈ ಪಾಟೀಲ್ ಹೇಳಿದಾಗ ನನ್ನ ಪರವಾಗಿ ಶಾಸಕ ಅಲ್ಲಮಪ್ರಭ