ಹಾವೇರಿ ಜಿಲ್ಲೆ ರಾಣೆಬೆನ್ನೂರು ಅರೇಮಲ್ಲಾಪುರದ ಶರಣಬಸವೇಶ್ವರ ಮಠದಲ್ಲಿ ಶೀಘ್ರವೇ ಶರಣಬಸವೇಶ್ವರರ ೧೦೮ ಮೂರ್ತಿ ಸ್ಥಾಪಿಸಲಾಗುವದು ಎಂದು ಮಠದ ಸ್ವಾಮಿಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಠದಲ್ಲಿ ಈಗಾಗಲೇ ೪೦ ಮೂರ್ತಿಗಳ ಸ್ಥಾಪನೆಯಾಗಿವೆ. ಉಳಿದ ೬೮ ಮೂರ್ತಿಗಳ ಕೆತ್ತನೆ ಕಾರ್ಯನಡೆದಿದೆ. ಉಳಿದ ಮೂರ್ತಿಗಳ ಸ್ಥಾಪನೆ ಶೀಘ್ರವೇ ಆಗಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ