ಮಾಗಡಿ-- ಮಾಗಡಿ ತಾಲ್ಲೂಕಿನ ವಿ.ಜಿ.ದೊಡ್ಡಿ ಗ್ರಾಮದ ವಿ.ಎಸ್.ಎಸ್.ಎನ್ ಬಳಿ ಭಾನುವಾರ ಬೆಳಿಗ್ಗೆ 8 ಗಂಟೆ ಸಮಯದಲ್ಲಿ ರಸಗೊಬ್ಬರಗಾಗಿ ನೂಕುನುಗ್ಗಲು ಉಂಟಾಯಿತು. ಯೂರಿಯಾ ರಸ ಗೊಬ್ಬರ ಪಡೆಯಲು ಬೆಳಗಿನ ಜಾವ 5 ಗಂಟೆಯಿಂದ ರೈತರು ವಿ.ಎಸ್.ಎಸ್.ಎನ್ ರಸಗೊಬ್ಬರ ಮಾರಟ ಮಳಿಗೆಯ ಮುಂದೆ ಜಮಾಯಿಸಿದ್ದರು. ರಸಗೊಬ್ಬರ ದಾಸ್ತಾನು ಕಡಿಮೆಯಿದ್ದ ಹಿನ್ನೆಲೆಯಲ್ಲಿ ರೈತರು ರಸಗೊಬ್ಬರ ಪಡೆಯಲು ನುಗ್ಗಿದ ಪರಿಣಾಮ ನೊಕುನುಗ್ಗಲು ಉಂಟಾಗಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತರ ಈಗಾಗಲೇ ಕೃಷಿ ಬಿತ್ತನೆ ಮಾಡಿದ್ದು ಈ ಸಮಯದಲ್ಲಿ ಎಲ್ಲಾ ರೈತರಿಗೂ ಯೂರಿಯಾ ರಸಗೊಬ್ಬರ ಅವಶ್ಯಕತೆ ಜಾಸ್ತಿ ಇ