ಎಷ್ಟೇ ಕಷ್ಟಗಳು ಬಂದರೂ ಸಹ ವಿದ್ಯಾರ್ಥಿಗಳು ನಿಮ್ಮ ಗುರಿ ಮರಿಯಬಾರದು ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ಯಾದವರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ನಡೆದ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಹಾಗು ನಿವೃತ್ತ ನೌಕರರಿಗೆ, ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದಾರಿಯಲ್ಲಿ ಹೋಗುವಾಗ ಕಲ್ಲು, ಮುಳ್ಳು, ಬಂಡೆಗಳು ದಾಟಿಕೊಂಡು ಹೋಗುತ್ತೇವೆ ಹಾಗೇ ಕಷ್ಟಗಳನ್ನು ಎದುರಿಸಬೇಕು ಎಂದರು.ಈ ವೇಳೆ ನಗರಸಭೆ ಅಧ್ಯಕ್ಷೆ ಶಿಲ್ಪಾ ಮುರುಳಿಧರ್, ಉಪಾಧ್ಯಕ್ಷೆ ಕವಿತಾ ಇದ್ದರು.