ಯಲ್ಲಾಪುರ : ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಅನಿರುದ್ಧ ಕಿರಣ್ ಭಟ್ ಗೋಣುರು ಮತ್ತು ವಿನೀತ್ ಗಣಪತಿ ಭಟ್ ನಂದೊಳ್ಳಿ.ಇವರು ಬುಧವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರಾಜ್ಯಮಟ್ಟದ ಜೂನಿಯರ್ ವರ್ಬೆಟಲ್ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಶಿಕ್ಷಕ ಶ್ರೀಪಾದ ಭಟ್ಟ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ. 20 ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಪಿ ಗೆದ್ದಿರುವ ವಿದ್ಯಾರ್ಥಿಗಳಿಗೆ ಶಾಲಾ ಸಂಸ್ಥಾಪಕ ಅಧ್ಯಕ್ಷ ಎಸ್ ಎಲ್ ಭಟ್ ಮತ್ತು ಶಾಲಾ ಮುಖ್ಯೋಧ್ಯಾಪಕಿ ಅಕ್ಕಮಹಾದೇವಿ ಹಿರೇಮಠ , ಶಾಲಾ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.