5.ಸೋಮವಾರಪೇಟೆ:ನನ್ನ ಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟ,ಆಹಾರ ಇಲಾಖೆ ಅಧಿಕಾರಿಗಳ ದಾಳಿ ಭಾರಿಪ್ರಮಾಣದ ಅಕ್ಕಿ ವಶಪಡಿಸಿಕೊಂಡಿರುವ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಬಡಜನರ ಅನುಕೂಲಕ್ಕಾಗಿ ಸರ್ಕಾರ ನೀಡುತ್ತಿರುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿರುವ ದುರುಳರು ಒಂದೆಡೆಯಾದರೆ ಆ ಅಕ್ಕಿಯನ್ನು ಕಡಿಮೆಬೆಲೆಯಲ್ಲಿ ಕೊಂಡುಕೊಂಡು ಬೇರೆಡೆ ಸಾಗಿಸುವ ವ್ಯವಸ್ಥಿತ ಜಾಲ ಸಂತೆಯ ದಿನವಾದ ಇಂದು ಪಟ್ಟಣದಲ್ಲಿ ಅಕ್ಕಿ ಸಂಗ್ರಹಿಸಿರುವ ಖಚಿತ ಮಾಹಿತಿಯ ಮೇರೆಗೆ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಪಟ್ಟಣದ ತೋಟಗಾರಿಕೆ ಇಲಾಖೆ ಸಮೀಪ ದಾಳಿ ನಡೆಸಿ ಲಾರಿ ಸಹಿತ 142970ರೂಮೌಲ್ಯದ 4200ಕೆಜಿ ಅಕ್ಕಿಯನ್ನು ವಶಪಡಿಸಿಕೊಂಡು,ಆರೋಪಿ ಕೊಣನೂರಿನ ಇದ್ರೀಸ್ ವಿರುದ್ಧ ಕರ್ನಾಟಕ ಅಗತ್ಯವಸ್ತುಗಳ ಖಾಯಿದೆಯಂತೆ ಅ