ಸೋಮವಾರಪೇಟೆ:-ತಾಲೂಕಿನಲ್ಲಿ 1152ಬಿಪಿಎಲ್ ಕಾರ್ಡ್ ಗಳು ಅನರ್ಹಗೊಳ್ಳಲಿದೆ ಎಂದು ಆಹಾರ ಇಲಾಖೆ ನಿರೀಕ್ಷಕಿ ಯಶಸ್ವಿನಿ ತಿಳಿಸಿದ್ದಾರೆ.ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ಸಭೆಯು ಅಧ್ಯಕ್ಷ ಜಿ.ಎಂ.ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದರು.ಸರ್ಕಾರದಿಂದ ಈಗಾಗಲೇ ಪಟ್ಟಿ ಬಂದಿದ್ದು 1.2ಲಕ್ಷ ಆದಾಯ ಮೀರಿದ 992ಕಾರ್ಡುಗಳು,7ಎಕರೆ ಮೀರಿ ಕೃಷಿ ಭೂಮಿ ಹೊಂದಿದ್ದ 15,ಜಿ.ಎಸ್.ಟಿ.ಪಾವತಿದಾರರು 5,ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳು 37,ಅಂತರ ರಾಜ್ಯದಲ್ಲೂ ಕಾರ್ಡ್ ಹೊಂದಿರುವ 15,ಒಂದು ವರ್ಷದಿಂದ ಪಡಿತರ ಪಡೆಯದಿರುವ 40 ಕಾರ್ಡುಗಳು ಸೇರಿದಂತೆ ಒಟ್ಟು 1152ಕಾರ್ಡುಗಳು ರದ್ದಾಗಲಿವೆ ಎಂದು ತಿಳಿಸಿದರು. ಗಂಭೀರ ಆರೋಗ್ಯ ಸಮಸ್ಯೆಯಲ್ಲಿರುವ ರೋಗಿಗಳ ಚಿಕಿತ್ಸೆಗಾಗ