ರಾಜ್ಯ ಸರ್ಕಾರ ಸಂಚಾರಿ ಇ-ಚಲನ್ ಮೂಲಕ ದಾಖಲಾಗಿರುವ ಪ್ರಕರಣಗಳಿಗೆ ಶೆ. 50% ರಷ್ಟು ರಿಯಾಯಿತಿ ನೀಡಿರುವ ಹಿನ್ನೆಲೆಯಲ್ಲಿ, ಕಲಬುರಗಿ ನಗರದಲ್ಲಿ ಅಗಷ್ಟ್ 25 ರಿಂದ ಸೆ.01 ರ ವರೆಗೆ ಒಟ್ಟು 421 ಪ್ರಕರಣಗಳಿಂದ ₹1,36,250 ದಂಡ ಸಂಗ್ರಹವಾಗಿದೆ ಎಂದು ಮಂಗಳವಾರ 3 ಗಂಟೆಗೆ ನಗರ ಪೊಲೀಸ್ ಆಯುಕ್ತರು ಪ್ರಕಟಣೆ ಮಾಹಿತಿ ನೀಡಿದ್ದಾರೆ. ರಿಯಾಯಿತಿ ಸೌಲಭ್ಯ ಸೆ. 12ರವರೆಗೆ ಮಾತ್ರ ಲಭ್ಯವಿರುವುದರಿಂದ ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ...