ಹುಬ್ಬಳ್ಳಿ: ಶ್ರೀ ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳ ವತಿಯಿಂದ ಹಳೆ ಹುಬ್ಬಳ್ಳಿ ದುರ್ಗದಬೈಲ್ ನಲ್ಲಿ ಹಮ್ಮಿಕೊಂಡಿದ್ದ 9ದಿನದ ವರೆಗೆ ಸ್ಥಾಪಿಸಲ್ಪಟ್ಟ ಸಾರ್ವಜನಿಕ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಗೆ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ಇಂದು ಚಾಲನೆ ನೀಡಿದರು. ಹಳೆ ಹುಬ್ಬಳ್ಳಿ ಮಹಾರಾಜಾ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅಶೋಕ ಕಾಟವೆ, ಮಾಜಿ ವಿಪ ಸದಸ್ಯರಾದ ಮೋಹನ್ ಲಿಂಬಿಕಾಯಿ, ಮಾಜಿ ಮಹಾಪೌರರಾದ ಪಾಂಡುರಂಗ ಪಾಟೀಲ್, ಗಣೇಶೋತ್ಸವ ಮಹಾಮಂಡಳದ ಪದಾಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.