ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಹೊಸಬಡಾವಣೆಗೆ ಹೋಗುವ ದಾರಿ ಒತ್ತುವರಿ ತೆರವು ಮಾಡಿಸುವಂತೆ ಗ್ರಾಪಂ ಮುಂದೆ ಸೋಮವಾರ ಹೊಸ ಬಡಾವಣೆ ಜನರು ಪಿಡಿಒ ಮನವಿ ಸಲ್ಲಿಸಿದರು. ಹೊಸಬಡವಾಣೆ ಅಂಗನವಾಡಿ ಕೇಂದ್ರ ಹಿಂಭಾಗದ ದಾರಿಯನ್ನು ಅಕ್ಕಪಕ್ಕದವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಎತ್ತಿನಗಾಡಿಗಳು, ಜನರು ಓಡಾಡಲು ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ವಿದ್ಯುತ್ ಕಂಬ ರಸ್ತೆ ಮಧ್ಯದಲ್ಲಿದೆ, ಇದನ್ನು ತೆರವು ಮಾಡಿಸಿ, ಒತ್ತುವರಿ ಬಿಡಿಸಿ ರಸ್ತೆ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯ ಮಾಡಿದರು. ಈ ವೇಳೆ ಬಸವರಾಜ್ , ಶಿವಮೂರ್ತಿ, ಶಾರದಮ್ಮ ಇದ್ದರು.