ರಸ್ತೆ ಗುಂಡಿಗಳಿಂದಾಗಿ ಶಾಲಾ ಮಕ್ಕಳಿದ್ದ ಬಸ್ ಪಕ್ಕಕ್ಕೆ ವಾಲಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಪ್ಟೆಂಬರ್ 12ರಂದು ಬೆಳಿಗ್ಗೆ 7:30ರ ಸುಮಾರಿಗೆ ಪಣತ್ತೂರು ಬಳಿ ಘಟನೆ ನಡೆದಿದ್ದು, ಸುಮಾರು ಇಪ್ಪತ್ತು ಮಕ್ಕಳಿದ್ದ ಶಾಲಾ ಬಸ್ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾಗಿದೆ.ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿದ್ದ ಗುಂಡಿಗಳಲ್ಲಿ ನೀರು ತುಂಬಿಕೊಂಡಿತ್ತು.ಓವರ್ ಟೇಕ್ ಭರದಲ್ಲಿ ಗುಂಡಿ ತಿಳಿಯದೆ ಬಸ್ ಚಲಾಯಿಸಿದಿದಾಗ ಏಕಾಏಕಿ ಬಸ್‌ನ ಚಕ್ರ ಕೆಸರಿನಲ್ಲಿ ಹೂತುಕೊಂಡು ಎಡಕ್ಕೆ ವಾಲಿದೆ. ತಕ್ಷಣ ಬಸ್ ನಿಲ್ಲಿಸಿದ್ದರಿಂದ ಸಂಭಾವ್ಯ ಅವಘಡವೊಂದು ತಪ್ಪಿದೆ.