ಕಲಬುರಗಿ ಭೀಮಾ ನದಿ ಪ್ರವಾಹ ಹಾಗೂ ಮಳೆಗೆ ನಲುಗಿ ಹೋಗಿದೆ. ಗ್ರಾಮಗಳಲ್ಲಿ ಮನೆಗಳಿ್ಎ ನೀರು ನುಗ್ಗಿ ಜನ ಪಡಬಾರದ ಕಷ್ಟ ಪಡುತ್ತಿದ್ದಾರೆ. ಜೇವರ್ಗಿ ತಾಲೂಕಿನ ಕೋನಹಿಪ್ಪರಗಾ ಗ್ರಾಮ ಕೂಡಾ ನೀರಿನಲ್ಲಿ ಮುಳುಗಿದೆ. ಗ್ರಾಮದಲ್ಲಿ ಆಹಾರ ಪದಾರ್ಥಗಳು ಸಿಗದೆ ಜನರು ತೊಂದರೆಗೆ ಒಳಗಾಗಿದ್ದಾರೆ. ಎದೆಯ ಮಟ್ಟಕ್ಕಿರು ನೀರಿನಲ್ಲಿ ನಡೆದುಕೊಂಡು ಪಕ್ಕದ ಊತಿಗೆ ಹೋಗಿ ಆಹಾರ ಪದಾರ್ಥ ತರುತ್ತಿದ್ದಾರೆ. ಒಂದು ಗಂಜಿ ಕೇಂದ್ರ ತೆರೆದಿರುವದು ಬಿಟ್ರೆ ಮತ್ಯಾವ ಸಹಾಯ ಜಿಲ್ಲಾಢಳಿತ, ಶಾಸಕ ಅಜಯಸಿಂಗ್ ಮಾಡಿಲ್ಲ, ಕನಿಷ್ಠ ಪಕ್ಷ ಒಂದು ಬೋಟ್ ವ್ಯವಸ್ಥೆಯನ್ನಾದ್ರೂ ಮಾಡಿ ಅಂತ ಸ್ಥಳಿಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಭಾನುವಾರ 4 ಗಂಟೆಗೆ ವಿಡಿಯೋ ಮಾಡಿ ಸರ್ಕಾರ ಹಾಗೂ ಜನಪ್ರತಿನಿಧಿ, ಅಧಿಕಾರಿಗಳ ವಿರುದ್ಧ ಕೆಂಡ ಕಾರಿದ್ದಾರೆ..