ಹುಬ್ಬಳ್ಳಿ: ನಿರಂತರ ಸುರಿದ ಬಾರೀ ಮಳೆಯಿಂದಾಗಿ ನಗರದ ದಾಜೀಬಾನ್ ಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನದ ಎದುರಿಗಿನ ರಾಜುಕಾಲುವೆ ತುಂಬಿ ಹರಿದ ಪರಿಣಾಮ ಚರಂಡಿ ನೀರೆಲ್ಲಾ ಮುಖ್ಯ ರಸ್ತೆಯಲ್ಲಿ ಹರಿದು ದುರ್ನಾತ ಬೀರಿ ತ್ಯಾಜ್ಯವೆಲ್ಲಾ ರಸ್ತೆಯಲ್ಲಿ ನಿಂತಿದ್ದು ಕಂಡು ಬಂದಿತು. ಇನ್ನು ರಸ್ತೆಯ ಸಂಚರಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.