ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್ಸ್ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಜತೆ ಸೆಪ್ಟೆಂಬರ್ 1ರಂದು ಸಂಜೆ 5ಗಂಟೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕುಮಾರ ಪಾರ್ಕ್‌ನ ಸರಕಾರಿ ನಿವಾಸದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಕ್ರೆಡಾಯ್ ಕರ್ನಾಟಕ ಅಧ್ಯಕ್ಷ ಭಾಸ್ಕರ್, ಸಿಇಒ ಅನಿಲ್ ನಾಯಕ್, ಬೆಂಗಳೂರು ಘಟಕದ ಜೈದ್ ಮೊಮೆನ್, ಪ್ರೆಸ್ಟೀಜ್ ಗ್ರೂಪ್ ನ ಇರ್ಫಾನ್ ರಜಾಕ್, ಬ್ರಿಗೇಡ್ ಗ್ರೂಪ್ ನ ಜಯಶಂಕರ್, ಸ್ಟೇರ್ಲಿಂಗ್ ಗ್ರೂಪ್ ನ ರಮಣ್ ಶಾಸ್ತ್ರಿ, ಶೋಭಾ ಗ್ರೂಪ್ ನ ಎಂ.ಡಿ. ಜಗದೀಶ್ ನಂಗಿನೇನಿ, ಚಾರ್ಟ್ರಡ್ ಹೌಸಿಂಗ್ ನ ಬಿಮಲ್ ಹೆಗ್ಡೆ ಮತ್ತಿತರರು ಭಾಗವಹಿಸಿದ್ದರು.