ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸೆಕ್ಯೂರಿಟಿ ಕಾರಣದಿಂದ ಅವರನ್ನ ಬಳ್ಳಾರಿ ಜೈಲಿಗೆ ಕಳುಹಿಸಲು ಈಗಾಗಲೇ ನ್ಯಾಯಾಲಯಕ್ಕೆ ಜೈಲಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಶನಿವಾರ ವಿಚಾರಣೆ ನಡೆದಿದ್ದು ಆಕ್ಷೇಪಣೆ ಅರ್ಜಿ ಸಲ್ಲಿಸೋದಕ್ಕೂ ಆರೋಪಿ ಪರ ವಕೀಲರಿಗೆ ಕೋರ್ಟ್ ಅವಕಾಶ ನೀಡಿತ್ತು. ಇದೀಗ ಶನಿವಾರ ನಡೆದ ವಿಚಾರಣೆಯಲ್ಲಿ ಬೇರೆ ಜೈಲಿಗೆ ದರ್ಶನ್ ವರ್ಗಾವಣೆ ವಿಚಾರವನ್ನು ನ್ಯಾಯಾಲಯವು ಮುಂದೂಡಿಕೆ ಮಾಡಿದೆ. ದರ್ಶನ್ ಪರ ವಕೀಲರು ಸಮಯಾವಕಾಶ ಕೇಳಿದ್ದು ಇದೇ ಆಗಸ್ಟ್ 30ಕ್ಕೆ ವರ್ಗಾವಣೆ ಕುರಿತ ವಿಚಾರಣೆ ನಡೆಯಲಿದೆ. ಇತ್ತ ದರ್ಶನ್, ಪವಿತ್ರಾ ಹಾಗೂ ಒಟ್ಟೂ ಏಳು ಆರೋಪಿಗಳನ್ನು 57ನೇ ಸೆಷನ್ಸ್ ಕೋರ್ಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜೈಲಿನಿಂದಲೇ ಹಾಜರಾಗಿದ್ದರು.