ಅಡಿಕೆ ಕೊನೆಗೆ ಔಷಧಿ ಸಿಂಪಡಿಸುವ ವೇಳೆ ಕೃಷಿ ಕಾರ್ಮಿಕ ಮರದಿಂದ ಬಿದ್ದು ಸಾವನಪ್ಪಿದ ಘಟನೆ ಹೊಸನಗರ ತಾಲೂಕಿನ ಕಿಳಂದೂರು ಗ್ರಾಮದ ನೂಲಿಗ್ಗೇರಿಯಲ್ಲಿ ನಡೆದಿದೆ. ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಮತ್ತಿಮನೆ ನಿವಾಸಿ ಕೃಷಿ ಕಾರ್ಮಿಕ ಸಾಧಿಕ್ (42) ಮೃತ ವ್ಯಕ್ತಿ. ಸಾಧಿಕ್ ಮತ್ತು ಮಂಜುನಾಥ ಎಂಬುವವರು ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಂದೂರು ಗ್ರಾಮದ ನೂಲಿಗೇರಿ ವಾಸಿ ಅಬ್ಬಾಸ್ ರವರ ಅಡಿಕೆ ತೋಟಕ್ಕೆ ಔಷಧಿಯನ್ನು ಹೊಡೆಯುವಾಗ ಸಾಧಿಕ್ ಎಂಬಾತ ಕಳೆದ ಮೂರು ದಿನದ ಹಿಂದೆ ಮರದಿಂದ ಕೆಳಬಿದ್ದು ತೀವ್ರ ಗಾಯಗೊಂಡಿದ್ದ, ಚಿಕಿತ್ಸೆ ಫಲಿಸದೇ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಮೃತಪಟ್ಟಿದ್ದಾನೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.