ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲ್ಮಂಗಿ ಗ್ರಾಮದಲ್ಲಿರುವ ಸಮುದಾಯ ಭವನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ವಿಜ್ಞ ವಿನಾಶಕ ಗಣೇಶನ ವಿಸರ್ಜನೆಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡುತ್ತ ಸಂಚರಿಸಲಾಯಿತು. ಈ ಸಂದರ್ಭದಲ್ಲಿ ಮಹಿಳೆಯರು ಯುವಕರು ಮುಖಂಡರು ಎಲ್ಲರೂ ಸೇರಿ ಮೆರವಣಿಗೆಯಲ್ಲಿ ತೆರಳುತ್ತಿದ್ದ ಗಣೇಶನಿಗೆ ಅಕ್ಷತೆ ಕಾಳುಗಳನ್ನು ಹಾಕಿ ಭಕ್ತಿಯನ್ನು ಸಮರ್ಪಿಸಿದರು.