ಏಲಕ್ಕಿ ಕಂಪಿನ ನಗರ ಹಾವೇರಿ ಏಲಕ್ಕಿ ಮಾಲೆಗಳಿಗೆ ಸಹ ಪ್ರಸಿದ್ದಿ ಪಡೆದಿದೆ. ಏಲಕ್ಕಿ ಮಾಲೆ ತಯಾರಿಸುವ ಮುಸ್ಲಿಂ ಕುಟುಂಬಗಳಿಗೆ ಗಣೇಶನ ಚತುರ್ಥಿ ದೊಡ್ಡ ಸೀಸನ್. ಈ ಹಬ್ಬದ ದಿನಗಳಲ್ಲಿ ನಡೆಯುವ ವಹಿವಾಟು ವರ್ಷದಲ್ಲಿ ಅತ್ಯೇಧಿಕ ಎನ್ನುತ್ತಾರೆ ಏಲಕ್ಕಿ ಮಾಲೆ ತಯಾರಿಸುವ ಕುಟುಂಬದ ಸದಸ್ಯರು. ಮನೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳಿಗೆ ಈ ಕುಟುಂಬಗಳು ಏಲಕ್ಕಿ ಮಾಲೆ ತಯಾರಿಸುತ್ತವೆ