ಬಳ್ಳಾರಿ ನಗರದಲ್ಲಿನ ಗಡಿಗಿ ಚನ್ನಪ್ಪ ಸರ್ಕಲ್ ಹತ್ತಿರ ಇರುವ ತಿಪ್ಪಯ್ಯ ಕ್ಲಬ್ ಎಂದೇ ಹೆಸರು ವಾಸಿಯಾಗಿರುವ ಕ್ಲಬ್ ಮೇಲೆ ಪೋಲೀಸರು ದಾಳಿ ನಡೆಸಿದ್ದಾರೆ.. ಹೌದು ನಗರದಲ್ಲಿನ ರೆಕ್ಕಾನ್ ಕ್ಲಬ್ ಮೇಲೆ ಎಸ್ಪಿ ನೇತೃತ್ವದಲ್ಲಿ ಬುಧವಾರ ರಾತ್ರಿ 10 ಗಂಟೆಗೆ ದಾಳಿ ನಡೆಸಿದ್ದು ಈ ದಾಳಿಯ ಸಂದರ್ಭದಲ್ಲಿ ಹಲವು ದಾಖಲೆಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ... ಕ್ಲಬ್ ನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಪೋಲೀಸರು ಕ್ಲಬ್ ನ ಪ್ರತಿಯೊಂದು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.. ಈ ದಾಳಿಯ ಸಂದರ್ಭದಲ್ಲಿ ಪೋಲೀಸರ ಜೊತೆ ಜಿಲ್ಲಾಧಿಕಾಗಳು ಸಹ ಭಾಗಿಯಾಗಿರುವುದು ವಿಶೇಷ.