ಹುಬ್ಬಳ್ಳಿ: ಮೈಸೂರಿನ ಚಾಮುಂಡೇಶ್ವರಿಯ ಪೂಜೆಗೆ ಬಾನು ಮುಸ್ತಾಕ್ ಅವರು ಸೀರೆ ಉಟ್ಟು, ಕುಂಕುಮ, ಅರಿಶಿನ ಹೂ ಮುಡಿದುಕೊಂಡು ಬಂದು ದಸರಾ ಉದ್ಘಾಟನೆ ಮಾಡಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನ ನೀಡಲಾಗಿದ್ದು ಅವರ ಮೇಲೆ ಗೌರವ ಇದೆ. ಆದರೆ ಹಿಂದೂ ಧಾರ್ಮಿಕ ಶ್ರೇಷಯ ಭಾವನೆ ಮುಕುಟವಾಗಿರುವ ದಸರಾ ಉದ್ಘಾಟನೆ ಅವರ ಕೈಯಲ್ಲಿ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರೆ.