ಮನೆಯಲ್ಲಿ ನನ್ನ ಮಗ ಜಗಳ ತೆಗೆದು ಮನೆಯಲ್ಲಿ ವಸ್ತುಗಳು ಇಲ್ಲ ಕಳೆದಿವೆ ಎಂದು ವಿನಾಕಾರಣ ಜಗಳ ತೆಗೆದು 4 ಬಾರಿ ಚಾಕು ಇರಿದಿದ್ದಾನೆಂದು ಗಾಯಾಳು ತಂದೆ ಯಲ್ಲಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಹುಬ್ಬಳ್ಳಿ ಅದರಗುಂಚಿ ಗ್ರಾಮದಲ್ಲಿ ಮನೆಯಲ್ಲಿ ಇಂದು ನಮ್ಮ ಮಗ ಮಹಾಂತೇಶ್ ಬಂದು ಮನೆಯಲ್ಲಿ ವಸ್ತುಗಳು ಕಾಣುತ್ತಿಲ್ಲ ಎಂದು ಜಗಳ ತೆಗೆದು ಹಲ್ಲೆ ಮಾಡಿ ಚಾಕು ಇರಿದಿದ್ದಾನೆ. ಈ ಹಿಂದೆಯೂ ಕೂಡ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ಅವನಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.