ತುಮಕೂರು ನಗರದಲ್ಲಿ ಪಾಕಿಸ್ತಾನದ ಸಂಘಟನೆ ಸಕ್ರಿಯವಾಗಿರುವ ಬಗ್ಗೆ ಸ್ವತಃ ಮುಸ್ಲಿಂ ಸಮುದಾಯದವರೇ ಎಸ್ಪಿ ಕಚೇರಿಗೆ ದೂರು ನೀಡಿರುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಅವರು, "ಇಂತಹ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸುವುದು ಸೂಕ್ತ. ನಾನೂ ಕೂಡ ಅದೇ ಒತ್ತಾಯ ಮಾಡುವೆ" ಎಂದು ಬುಧವಾರ ಮಧ್ಯಾಹ್ನ 2 ಗಂಟೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ಆರ್.ಎಸ್.ಎಸ್. ಗೀತೆ ಹೇಳಿದ ವಿಷಯಕ್ಕೆ ಸಂಬಂಧಿಸಿ ಅವರು ಸ್ಪಷ್ಟನೆ ನೀಡಿದರು. "ಡಿಕೆ ಶಿವಕುಮಾರ್ ದೇವರ ನಂಬಿಕೆ, ಆಚರಣೆ ಇರುವವರು. ಆರ್.ಎಸ್.ಎಸ್. ಗೀತೆ ಹೇಳಿದ ಮಾತ್ರಕ್ಕೆ ಅವರು ಬಿಜೆಪಿ ಸೇರುತ್ತಾರೆ ಎಂಬ ಅರ್ಥವಲ್ಲ. ಅವರು ಕಟ್ಟಾ ಕಾಂಗ್ರೆಸ್ ಬೆಂಬಲಿಗರು" ಎಂದು ಸುರೇಶ್