ಹಾಸನ: ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಮೈಸೂರು ದಸರ ಉತ್ಸವದ ಉದ್ಘಾಟನೆಗೆ ಹಾಸನದ ವಕೀಲರು ಹಾಗೂ ಲೇಖಕಿಯು ಆದ ಭಾನು ಮುಸ್ತಾಕ್ ರವರನ್ನು ಸರ್ಕಾರವು ಆಹ್ವಾನಿಸಿರುವುದು ನ್ಯಾಯ ಸಮ್ಮತವಾಗಿದೆ. ಸರ್ಕಾರದ ನಡೆಯನ್ನು ನಮ್ಮ ಪಕ್ಷ ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಭಾನು ಮುಸ್ತಾಕ್ ರವರು ರಚಿಸಿದ ಕನ್ನಡದ ಸಾಹಿತ್ಯವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ “ಬುಕರ್ ಪ್ರಶಸ್ತಿ"ಯನ್ನು ಗಳಿಸಲು ಕಾರಣವಾಗಿದೆ. ಸದರಿ ಸಾಃಹಿತ್ಯವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ ದೀಪಾ ಬಸ್ತಿ ರವರು ಕೂಡ ಈ ಪ್ರಶಸ್ತಿಗೆ ಭಾಜನರಾಗಿರುತ್ತಾರೆ ಎಂದರು.