ಹುಬ್ಬಳ್ಳಿ: ಸಾನ್ನಿಹಳ್ಳಿ ಶ್ರೀಗಳು ಜನಗಣತಿ ವಿಷಯ ಆರಂಭವಾದಾಗಿನಿಂದ ವೀರಶೈವ ಲಿಂಗಾಯತರಲ್ಲಿ ಗೊಂದಲ ಉಂಟಾಗಿದ್ದು, ಎಲ್ಲ ಸ್ವಾಮೀಜಿಗಳು ಸಮೂದಾಯ ಒಂದು ಮಾಡಲು ಹೊರಾಡುತ್ತಿದ್ದಾರೆ. ಆದರೆ ಶುಕ್ರವಾರ ಧಾರವಾಡದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ನಾಡಿನ ಪ್ರತಿಷ್ಠಿತ ಸಾನ್ನಿಹಳ್ಳಿಯ ಶ್ರೀಗಳು ದಿಂಗಾಲೇಶ್ವರ ಶ್ರೀಗಳು ಬಟ್ಟೆ ಬದಲಾವಣೆ ಮಾಡಿದ್ದಾರೆ. ಕಾವಿ ಬಿಟ್ಟು ಬಿಳಿ ಬಟ್ಟೆ ಧರಿಸಿ ಗೊಸೂಂಬೆ ಆಗಿದ್ದಾರೆ ಎಂದು ನಮ್ಮ ಬಗ್ಗೆ ಮಾತನಾಡಿದ್ದಾರೆ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಹಟ್ಟಿ ಫಕೀರ ಸಂಸ್ಥಾನ ಮಠದ ಸಂಪ್ರದಾಯದಂತೆ ನಾವು ಕೇಸರಿ ಪೇಟ್, ಬಿಳಿ ಬಟ್ಟೆ, ಹಸಿರು ಶಾಲು ಕೊಟ್ಟಿದ್ದೇವೆ ಎಂದರು.