ಜೇವರ್ಗಿಯಲ್ಲಿ ತಾಲೂಕಾಡಳಿತದ ವತಿಯಿಂದ ನಾರಾಯಣ ಗುರುಗಳ 171ನೇ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು. ಮೆರವಣಿಗೆ ಬಳಿಕ ನಡೆದ ವೇದಿಕೆಯಲ್ಲಿ ಶರಣು ಗುತ್ತೇದಾರ್ ಮಾತನಾಡಿ, ನಾರಾಯಣ ಗುರು ಸಮಾಜ ಸುಧಾರಣೆಯ ದಿಕ್ಕು ತೋರಿಸಿದ ಶ್ರೇಷ್ಠ ಆಧ್ಯಾತ್ಮಿಕ ಚಿಂತಕರಾಗಿದ್ದರು ಎಂದರು.ಈ ಸಂದರ್ಭದಲ್ಲಿ ಪ್ರವಣಾನಂದ ಸ್ವಾಮೀಜಿ ಅವರು ಮಾತನಾಡಿ, ಈಡಿಗ ಸಮಾಜ ಹಿಂದುಳಿದ ವರ್ಗಗಳಲ್ಲಿ ಸೌಲಭ್ಯ ವಂಚಿತವಾಗಿದ್ದು, ಸಮಾಜಕ್ಕೆ ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿ ಅಗತ್ಯವಾಗಿದೆ. ಈಡಿಗ ಸಮಾಜವನ್ನು 2A ಕೆಟಗರಿಯಿಂದ ಎಸ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ತಾಲೂಕ ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ನಾಗರಾಜ್ ಗುತ್ತೇದಾರ್ ಸೇರಿದಂತೆ ಗಣ್ಯರು