ತಾಲೂಕಿನ ಸೋಗಳ್ಳಿ ಹಾಡಿಯ ನಿವಾಸಿ ಹಾಗೂ ಅರಣ್ಯ ಇಲಾಖೆ ವನಪಾಲಕ ಮಾದ ಅವರ ನಿವಾಸಕ್ಕೆ ಎಸಿಎಫ್ ಮಧು ಆರ್.ಎಪ್.ಒ ಸಿದ್ದರಾಜು ಭೇಟಿ ನೀಡಿ ಅರೋಗ್ಯ ವಿಚಾರಿಸಿದರು. ಕಳೆದ ತಿಂಗಳು ಮಾದ ಅರಣ್ಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಮರಿಗಳೊಂದಿಗೆ ಅಡ್ಡಾಡುತ್ರಿದ್ದ ಕರಡಿ ದಾಳಿ ಮಾಡಿ ಮಾದ ಸೇರಿ ನಾಲ್ವರು ದಾಳಿಗೆ ಒಳಗಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮನೆಗೆ ಮರಳಿದ ಮಾಸ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿ ದೈರ್ಯ ಹೇಳಿದರು.