ಹುಬ್ಬಳ್ಳಿ; ರಾಜ್ಯದಲ್ಲಿ ವಿದ್ಯುಯ ಸಮಸ್ಯೆ ಇಲ್ಲವೆಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಹಗಲ್ಲೊತ್ತಿನಲ್ಲಿಯೇ ರೈತರಿಗೆ ವಿದ್ಯುತ್ ನೀಡುವ ಕೆಲಸ ಆದಷ್ಟು ಬೇಗನೆ ಮಾಡುತ್ತೇವೆ ಎಂದರು. ಪ್ರತಿ ತಿಂಗಳು ೯೦೦ ಕೋಟಿ ರೂ ಗೃಹಜ್ಯೋತಿ ಹಣವನ್ನು ಸರ್ಕಾರ ನೀಡುತ್ತಿದೆ ಎಂದ ಅವರು ಸರಕಾರದಿಂದ ಈ ಕುರಿತು ಯಾವುದೇ ಬಾಕಿ ಉಳಿದಿಲ್ಲ ಎಂದರು.