ಪಾವಗಡದಲ್ಲಿ ವಕೀಲರ ಪ್ರತಿಭಟನೆ “ಕೌಂಟರ್ ಕೇಸ್ ದಾಖಲಿಸಿದ ಪೊಲೀಸರ ಅಮಾನತಿಗೆ ಪಟ್ಟಣದಲ್ಲಿ ವಕೀಲರ ಸಂಘದ ಅಧ್ಯಕ್ಷ ಶೇಷನಂದನ್ ಆಗ್ರಹ ಮಾರಣಾಂತಿಕ ಹಲ್ಲೆಗೆ ಒಳಗಾದ ವಕೀಲ ಸುಧಾಕರ್ ವಿರುದ್ಧ ರಾಜಕೀಯ ಒತ್ತಡಕ್ಕೆ ಮಣಿದು ಕೌಂಟರ್ ಕೇಸ್ ದಾಖಲಿಸಿದ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ಅಮಾನತ್ತು ಮಾಡಬೇಕೆಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್. ಶೇಷನಂದನ್ ಒತ್ತಾಯಿಸಿದರು. ಗುರುವಾರ ಮಧ್ಯಾಹ್ನ 12 ಗಂಟೆಯಲ್ಲಿ ಪಾವಗಡ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಿಂದ ಅಂಬೇಡ್ಕರ್ ವೃತ್ತದವರೆಗೆ ಜಾಥಾ ನಡೆಸಿ, ನಂತರ ಶನೈಶ್ವರ ದೇವಾಲಯ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ವಕೀಲರು, ತಹಶೀಲ್ದಾರ್ ವರದರಾ