ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ 2024-25ನೇ ಸಾಲಿನಲ್ಲಿ 41.33 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸಂಘದ ಮಹಾಸಭೆ ಸೆ.13 ರಂದು ನಗರದ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಜಿ.ಎಂ.ಸತೀಶ್ ಪೈ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕು ಪ್ರಸ್ತುತ 2496 ಮಂದಿ ಸದಸ್ಯರುಗಳನ್ನು ಹೊಂದಿದ್ದು, ಬ್ಯಾಂಕಿನ ಅಧಿಕೃತ ಪಾಲು ಬಂಡವಾಳ ರೂ.180.74 ಲಕ್ಷ ಸಂಗ್ರಹಗೊAಡಿದೆ. ಬ್ಯಾಂಕಿನ ದುಡಿಯುವ ಬಂಡವಾಳ ರೂ.5441.00 ಲಕ್ಷ ಆಗಿದ್ದು, ಕಳೆದ ಸಾಲಿಗಿಂತ ರೂ.126.23 ಲಕ್ಷದಷ್ಟು ಅಧಿಕಗೊಂಡಿದೆ ಎಂದರು. ಪ್ರಸ್ತುತ ರೂ.4867.68 ಲಕ್ಷದಷ್ಟು ವಿವಿಧ ಠೇವಣಾತಿಗಳನ್ನು ಹೊಂದಿದ್ದು, ಕಳೆದ ಸಾಲಿಗಿಂತ ರೂ.39.25 ಲಕ್ಷದಷ್ಟು ಏರಿಕೆ ಉಂಟಾಗಿದೆ. ಸುಮಾರು ರೂ.674.