ಕನ್ನಡ ಭಾಷೆಯಲ್ಲಿ ವೈದ್ಯಕೀಯ ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ, ರಾಜ್ಯದ ವೈದ್ಯರು ಲೇಖಕರಾಗಿ ಮಾಡುತ್ತಿರುವ ಸೃಜನಾತ್ಮಕ ಕೆಲಸವನ್ನು ಗೌರವಿಸುವ ಉದ್ದೇಶದಿಂದ ಹಾಗೂ ಹೊಸ ಪೀಳಿಗೆಯ ವೈದ್ಯರಲ್ಲಿ ಸಾಹಿತ್ಯ ಆಸಕ್ತಿ ಮೂಡಿಸಬೇಕಾದ ಅಗತ್ಯವಿದೆಯೆಂದು ಡಾ. ರಹಮತ್ ತರೀಕೆರೆ ಅಭಿಪ್ರಾಯಪಟ್ಟರು. ಅವರು ಶನಿವಾರ ಬೆಳಿಗ್ಗೆ 10ಗಂಟೆಗೆ ನಗರದ ಡಾಕ್ಟರ್ ರಾಜಕುಮಾರ್ ರಸ್ತೆಯ ಬಿಪಿಎಸ್‌ಸಿ ಶಾಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ಮತ್ತು ಕನ್ನಡ ವೈದ್ಯ ಬರಹಗಾರರ ಸಮಿತಿ ವತಿಯಿಂದ ಎರಡು ದಿನಗಳ ಕನ್ನಡ ವೈದ್ಯಕೀಯ ಬರಹಗಾರರ ಆರನೇ ಸಮ್ಮೇಳನದ ಉದ್ಘಾಟಿಸಿ ಮಾತನಾಡಿ, ಭಾರತೀಯ ವೈದ್ಯಕೀಯ ಸಂಘ – ಕನ್ನಡ ರಾಜ್ಯ ಶಾಖೆ ಹಾಗೂ ಕನ್ನಡ ವೈದ್ಯ ಬರಹಗಾರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ "ವೈದ್ಯಕೀಯ ಸಾಹಿತ್ಯ - ಜನಪದ ಸಾಹಿತ್ಯ" ಎಂ