ರಸ್ತೆಯಲ್ಲಿ ಸಿಕ್ಕವರ ಮೇಲೆ ಲಾಂಗ್ ಬೀಸಿ ಮತ್ತು ಕಾರುಗಳ ಗ್ಲಾಸ್ ಒಡೆದಿದ್ದ ಆರೋಪಿಗಳನ್ನು ಚಂದ್ರ ಲೇಔಟ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯ, ಚಂದ್ರಾಲೇಔಟ್, ಮಾಗಡಿ ರೋಡ್ ಅನ್ನಪೂರ್ಣೇಶ್ವರಿ ನಗರದಲ್ಲಿ ಲಾಂಗ್ ಹಿಡಿದು ದಾಂದಲೆ ಹಾಕಿದ ಆರು ಜನ ಪುಂಡರು ಅರೆಸ್ಟ್ ಆಗಿದ್ದಾರೆ. ಎರಡು ಬೈಕ್ ನಲ್ಲಿ ಬಂದಿದ್ದ ಆರು ಮಂದಿ ಆಗಂತುಕರು, ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು. ಇತ್ತ ಘಟನೆ ಸಂಬಂಧ ಹಲ್ಲೆಗೆ ಒಳಗಾಗಿದ್ದವರು ಭಯಪಟ್ಟು ಓಡಿ ಹೋಗಿದ್ರು. ಘಟನೆ ನಡೆದು ಎರಡು ದಿನದ ಬಳಿಕ ದೂರುದಾರನ ಹುಡುಕಿ ಕರೆತಂದು ದೂರು ಪಡೆದು, ಪುಂಡರನ್ನು ಬಂಧಿಸಲಾಗಿದೆ. ಅರುಣ್, ಪ್ರಜ್ವಲ್, ದಿಲೀಪ್, ಡಾಲಿ, ರವಿ ಬಂಧಿತ ಆರೋಪಿಗಳು.