ಹೊಳೆನರಸೀಪುರ: ಹಾಸನ ಮುಖ್ಯರಸ್ತೆಯ ಕಾಮಸಮುದ್ರ ಪಾಳ್ಯ ಬಳಿ ಸಿಮೆಂಟ್ ಚೀಲ ತುಂಬಿದ ಟಾಟಾ ಏಸ್‌ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದು, ಅದೇ ವೇಳೆಗೆ ರಾಷ್ಟ್ರೀಯ ಹೆದ್ದಾರಿ ೩೭೩ ರಲ್ಲಿ ಸಂಚರಿಸುತ್ತಿದ್ದ ಸಂಸದ ಶ್ರೇಯಸ್ ಪಟೇಲ್ ಅವರು ಕೂಡಲೇ ಇಳಿದು ಗಾಯಾಳು ಚಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದರು. ಮಾತ್ರವಲ್ಲ ಕೆಲಹೊತ್ತು ಘಟನಾ ಸ್ಥಳದಲ್ಲೇ ನಿಂತು ರಸ್ತೆಯಲ್ಲಿ ಚೆಲ್ಲಾಡಿದ್ದ ಸಿಮೆಂಟ್ ಚೀಲಗಳನ್ನು ಸ್ಥಳೀಯರ ಮೂಲಕ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಸಿಮೆಂಟ್ ತುಂಬಿದ ವಾಹನ ಪಲ್ಟಿಯಾಗಲು ಚಲಿಸುತ್ತಿದ್ದಾಗಲೇ ಟಯರ್ ಸಿಡಿದಿದ್ದು ಕಾರಣ ಎನ್ನಲಾಗಿದೆ. ಸಂಸದರ ಮಾನವೀಯತೆ, ಸ್ಪಂದನಾ ಗುಣಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.