ದೇಶದಾದ್ಯಂತ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಭಕ್ತ ಸಮೂಹ ಆಚರಿಸಿದೆ, ಹಲವೇಡೆ ಗಣೇಶ ಮೂರ್ತಿಯನ್ನು ನಾನಾ ರೀತಿಯಲ್ಲಿ ಟ್ಯಾಬ್ಲೋ ಮಾಡಿ ಗಲ್ಲಿ ಗಲ್ಲಿಗಳಲ್ಲಿ ಓಡ್ಡೋಲಗದಿಂದ ಸುತ್ತಿಸಿ ಜಲಮೂಲದಲ್ಲಿ ವಿಸರ್ಜಿಸ್ತಾ ಇದ್ದಾರೆ,ಇದರ ನಡುವೆ ಚಿಕ್ಕಮಗಳೂರಿನ ಕೊಪ್ಪದ ಮೇಗಲ ಪೇಟೆಯಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಭಿನ್ನ ರೀತಿಯ ಟ್ಯಾಬ್ಲೋ ನೋಡುಗರ ಗಮನ ಸೆಳೆಯಿತು. ಗ್ರಾಮದಲ್ಲಿ 36 ವರ್ಷಗಳಿಂದ ಗಣೇಶನನ್ನು ಕೂರಿಸಿಕೊಂಡು ಬರುತ್ತಿದ್ದು, ಪ್ರತಿ ವರ್ಷ ನಾನಾ ಥೀಮ್ ನೊಂದಿಗೆ ಟ್ಯಾಬ್ಲೋ ರಚಿಸಿಕೊಂಡು ಬರ್ತಾ ಇದ್ದಾರೆ,ಅದೇ ಮಾದರಿಯಲ್ಲಿ ಈ ಬಾರಿ ಆಪರೇಷನ್ ಸಿಂಧೂರ್ ಟ್ಯಾಬ್ಲೊ ರಚಿಸಿ ಗಣೇಶನ್ನ ರಾಜಬೀದಿಯಲ್ಲಿ ಮೆರವಣಿಗೆ ಮಾಡಿ ವಿಸರ್ಜಿಸಿದ್ರು..ಇನ್ನು ಮಹಿಳೆಯರು ಮಕ್ಕಳು ಎನ್ನದೇ ವಾಲಗದ ಸದ್ದಿಗೆ ಹೆಜ್ಜ