ಆಗಸ್ಟ್ 24ರ ಸಂಜೆ 6 ಗಂಟೆಯ ಸುಮಾರಿಗೆ ಕೆ ಆರ್ ಮಾರ್ಕೆಟ್ ನಲ್ಲಿ ಬಿಎಂಟಿಸಿ ಗುದ್ದಿ ಮಗು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಮಗುವಿನ ಬಗೆಗೆ ಒಂದಷ್ಟು ಮಾಹಿತಿ ಸಿಕ್ಕಿದೆ. ಎಂಟು ವರ್ಷದ ಶಬರೀಶ್ ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕನ ಮಗ ಅನ್ನೋ ಮಾಹಿತಿ ಸಿಕ್ಕಿದೆ. ದೇವರಿಗೆ ವಿಶೇಷ ಹರಕೆ ಹೊತ್ತಿ ಕೊಂಡಿದ್ದರು ಕೂಡ ಶಬರೀಶ್ ಬದುಕುಳಿಯಲಿಲ್ಲ. ಹೆತ್ತವರ ಎದುರೆ ಸಾವನ್ನುತ್ತಿದ್ದಾನೆ. ಸದ್ಯ ಚಾಲಕ ನಿರ್ವಾಹಕ ಸ್ಟೇಷನ್ ಒಳಗಡೆ ಅವಿತು ಕುಳಿತಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ