ಹುಬ್ಬಳ್ಳಿ: ಸರ್ ಸಿದ್ದಪ್ಪ.ಕಂಬಳಿ ಅವರ ಜನ್ಮ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಮಂಭಾಗದಲ್ಲಿರುವ ಪೂಜ್ಯರ ಪುತ್ಥಳಿಗೆ ಮೇಯರ್ ಜ್ಯೋತಿ ಪಾಟೀಲ್ ಅವರು ಮಾಲಾರ್ಪಣೆ ಮಾಡಿ ಗೌರವಿಸಿದರು. ಈ ವೇಳೆ ಉಪಮೇಯರ್ ಸಂತೋಷ್ ಚವ್ಹಾನ್, ಪಾಲಿಕೆಯ ಅಧಿಕಾರಿಗಳು ಇದ್ದರು. ಇದೇ ಸಂದರ್ಭದಲ್ಲಿ ಅಳಗುಂಡಗಿ ಓಣಿಯಲ್ಲಿ ಸಿದ್ದಪ್ಪ.ಕಂಬಳಿ ಅವರ ಮೊಮ್ಮಗ ಪೋಷಿಸಿಕೊಂಡು ಬಂದ ಮ್ಯೂಸಿಯಂ ವೀಕ್ಷಿಸಲಾಯಿತು.