ಅಪ್ರಾಪ್ತ ಬಾಲಕಿಗೆ ಬಸ್‌ನಲ್ಲಿ ಕಿರುಕುಳ ನೀಡಿದ ಆರೋಪದಡಿ ಚಾಲಕನಿಗೆ ಬಟ್ಟೆ ಬಿಚ್ಚಿಸಿ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಪ್ಟೆಂಬರ್ 11ರಂದು ಬೆಳಿಗ್ಗೆ 8ಗಂಟೆ ಸುಮಾರಿಗೆ ಚಾಲುಕ್ಯ ಸರ್ಕಲ್ ಬಳಿ ಬಸ್ ತಡೆದ ಬಾಲಕಿಯ ಕಡೆಯವರು ಚಾಲಕ ಆರೀಫ್ ಎಂಬಾತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ತಡರಾತ್ರಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದ ಬಾಲಕಿ ಚಾರ್ಜ್ ಮಾಡಲು ಚಾಲಕನಿಗೆ ಮೊಬೈಲ್ ನೀಡಿದ್ದಳು. ಮೊಬೈಲ್ ವಾಪಸ್ ಕೇಳಿದಾಗ ಬಸ್‌ನ ಹೆಚ್ಚುವರಿ ಚಾಲಕ ಆರೀಫ್ ಅಸಂಬದ್ಧವಾಗಿ ಮಾತನಾಡಿದ್ದಲ್ಲದೆ, ಬಾಲಕಿ ಮಲಗಿದ್ದ ಸೀಟ್ ಬಳಿ ಬಂದು ಕಿರುಕುಳ ನೀಡಿದ್ದ ಎನ್ನಲಾಗಿದೆ.